Revelation of John 16

ದೇವರ ಕೋಪದ ಬಟ್ಟಲುಗಳು

1ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು
16:1 ಪ್ರಕ. 15:1:
ಆ ಏಳು ಮಂದಿ ದೇವದೂತರಿಗೆ, <<ನೀವು ಹೋಗಿ
16:1 ಪ್ರಕ. 15:7:
ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ
16:1 ಕೀರ್ತ. 79:6; ಯೆರೆ. 10:25; ಚೆಫ. 3:8:
ಸುರಿಯಿರಿ>> ಎಂದು ಹೇಳಿತು.

2ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು
16:2 ಪ್ರಕ. 13:16:
ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ
16:2 ವ. 11; ವಿಮೋ. 9:9-11:
ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.

3ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ
16:3 ಪ್ರಕ. 8:8:
ರಕ್ತದ ಹಾಗಾಯಿತು ಮತ್ತು
16:3 ಪ್ರಕ. 8:9; ವಿಮೋ. 7:20, 21
ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು.

4ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು
16:4 ಪ್ರಕ. 8:10:
ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ
16:4 ವಿಮೋ. 7:17-20:
ಅವುಗಳ ನೀರು ರಕ್ತವಾಯಿತು.

5ಆ ಮೇಲೆ ಜಲಾಧಿಪತಿಯಾದ ದೂತನು, <<ನೀನು
16:5 ಪ್ರಕ. 11:17; 1:4, 8; 4:8:
ಇರುವಾತನೂ
16:5 ಭೂತ, ಭವಿಷ್ಯತ್, ವರ್ತಮಾನ ಕಾಲಗಳಲ್ಲಿರುವಂಥವನು. ಪ್ರಕ. 1:4:
ಇದ್ದಾತನೂ
16:5 ಪ್ರಕ. 15:4:
ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ.
6ಅವರು
16:6 ಪ್ರಕ. 11:18:
ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು
16:6 ಪ್ರಕ. 13:15; 18:24
ಸುರಿಸಿದ್ದರಿಂದ,
16:6 ಯೆಶಾ. 49:26; ಲೂಕ. 11:49, 50.
ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.>> ಎಂದು ಹೇಳುವುದನ್ನು ಕೇಳಿದೆನು.
7ಆ ಮೇಲೆ
16:7 ಪ್ರಕ. 6:9; 14:18. ಅಥವಾ, ಬಲಿ ಕೊಡುವ ಸ್ಥಳ
ಯಜ್ಞವೇದಿಯು ಮಾತನಾಡುತ್ತಾ, <<ದೇವರಾದ ಕರ್ತನೇ ಸರ್ವಶಕ್ತನೇ,
16:7 ಪ್ರಕ. 15:3; ಕೀರ್ತ. 119:137:
ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ>> ಎಂದು ಹೇಳುವುದನ್ನು ಕೇಳಿದೆನು.

8ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು. 9ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು
16:9 ಪ್ರಕ. 16:11, 21:
ದೂಷಿಸಿದಲ್ಲದೆ, ಅವರು
16:9 ದಾನಿ. 5:22 23; ಪ್ರಕ. 2:21:
ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ.

10ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ
16:10 ಪ್ರಕ. 13:2:
ಸಿಂಹಾಸನದ ಮೇಲೆ ಸುರಿಯಲು
16:10 ವಿಮೋ. 10:21-23; ಪ್ರಕ. 9:2:
ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು,
11ತಮ್ಮ ಯಾತನೆಗಳಿಗಾಗಿಯೂ
16:11 ವ. 2:
ಹುಣ್ಣುಗಳ ದೆಸೆಯಿಂದಲೂ
16:11 ಪ್ರಕ. 11:13
ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ.

12ಆರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು
16:12 ಪ್ರಕ. 9:14:
ಯೂಫ್ರಟಿಸ್ ಎಂಬ ಮಹಾ ನದಿಯಲ್ಲಿ ಸುರಿಯಲು,
16:12 ಯೆಶಾ. 41:2, 25; 46:11:
ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ
16:12 ಯೆಶಾ. 11:15; 44:27; ಯೆರೆ. 50. 38; 51:32, 36:
ಅದರ ನೀರು ಬತ್ತಿಹೋಯಿತು.
13ಆಗ
16:13 ಪ್ರಕ. 12:3, 9:
ಘಟಸರ್ಪದ ಬಾಯಿಂದ,
16:13 ಪ್ರಕ. 13
ಮೃಗದ ಬಾಯಿಂದ ಮತ್ತು
16:13 ಪ್ರಕ. 13:11-17; 19:20; 20:10:
ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು.
14ಇವು
16:14 ಪ್ರಕ. 13:13; 1 ತಿಮೊ. 4:1:
ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ
16:14 ಪ್ರಕ. 6:17:
ದೇವರ ಮಹಾದಿನದ
16:14 ಪ್ರಕ. 20:8; 17:14; 19:19:
ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು.

15<<ಇಗೋ
16:15 ಪ್ರಕ. 3:3:
ಕಳ್ಳನು ಬರುವಂತೆ ಬರುತ್ತೇನೆ.
16:15 ಪ್ರಕ. 3:18:
ತಾನು
16:15 ಬೆತ್ತಲೆಯಾಗಿ.
ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ
16:15 ಮತ್ತಾ 24:42; 25:13; 26:41; ಮಾರ್ಕ. 14:34-38; 1 ಕೊರಿ. 16:13:
ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.>>

16ಆಗ
16:16 ಅಶುದ್ಧಾತ್ಮಗಳು ಅಥವಾ ದೆವ್ವಗಳು.
ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ
16:16 ಅಂದರೆ ಮೆಗೆದ್ದೋ ಬೆಟ್ಟ; ಜೆಕ. 12:11; ನ್ಯಾಯ. 5:19:
ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು.

17ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ <<ಸಂಭವಿಸಿ
16:17 ಪ್ರಕ. 10:6
ಆಯಿತು>> ಎಂದು ಹೇಳಿತು.
18ಆಗ
16:18 ಪ್ರಕ. 4:5; 8:5; 11:19:
ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ
16:18 ಪ್ರಕ. 6:12; 11:13:
ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.
19
16:19 ಪ್ರಕ. 11:8:
ಮಹಾ ಪಟ್ಟಣವು
16:19 ಪ್ರಕ. 11:13:
ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ
16:19 ಪ್ರಕ. 14:8:
ಬಾಬೆಲನ್ನು
16:19 ಪ್ರಕ. 18:5:
ಜ್ಞಾಪಿಸಿಕೊಂಡು
16:19 ಪ್ರಕ. 14:10:
ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು.

20ಆಗ ಪ್ರತಿಯೊಂದು
16:20 ಪ್ರಕ. 6:14:
ದ್ವೀಪವು ಓಡಿಹೋಗಿ ಮರೆಯಾದವು ಬೆಟ್ಟಗಳು ಕಾಣದಂತಾದವು.
ಮತ್ತು ಆಕಾಶದಿಂದ ಮನುಷ್ಯರ ಮೇಲೆ
16:21 ಪ್ರಕ. 11:19; ವಿಮೋ. 9:23-25
ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಅಲಿಕಲ್ಲು ಸುಮಾರು
16:21 ಮೂಲ:ಒಂದು ತಲಾಂತು, ಸುಮಾರು ನೂರು ಪೌಂಡುಗಳಷ್ಟು ತೂಕ. ಹಳೇ ಕಾಲಮಾನವನ್ನು ಅಳೆಯುವ ಅಳತೆ ಅಥವಾ ತೂಕ.
ನಲ್ವತ್ತು ಕಿಲೊಗ್ರಾಮಿನಷ್ಟು ತೂಕವಾಗಿತ್ತು. ಆ ಆಲಿಕಲ್ಲಿನ ಮಳೆಯ ಉಪದ್ರವವು ಬಹಳ ವಿಪರೀತವಾದ್ದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು
16:21 ಪ್ರಕ. 16:9, 11:
ದೇವರನ್ನು ದೂಷಿಸಿದರು.

21

Copyright information for KanULB